ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ. ಅಜನೀಶ್ ಅವರು ಉಳಿದವರು ಕಂಡಂತೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು ರಂಗಿತರಂಗ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.ಇತ್ತೀಚಿಗೆ ಇವರು ಕುರಂಗು ಬೊಮ್ಮಾಯಿ ಹಾಗು ರಿಚಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ತಮಿಳು ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಡಿಸಿದ್ದಾರೆ .